ನಾಳೆಯಿಂದ ಜಾಕ್ಸನ್
Posted date: 14 Wed, Jan 2015 – 12:14:54 PM

ಸಾಹಸ ಸಿನಿಮಾಗಳ ಸರದಾರ, ಹಾಸ್ಯ ಹಾಗೂ ಭಾವನಾತ್ಮಕ ಸಿನಿಮಗಳಿಗೂ ಫೇಮಸ್ ‘ಧುನಿಯ ವಿಜಯ್’ ಅವರ ‘ಜಾಕ್ಸನ್’ ಕನ್ನಡ ಸಿನಿಮಾ  ೧೫ ಜನವರಿ ೧೫ ಸಂಕ್ರಾಂತಿ ಹಬ್ಬದಂದು ಬಿಡುಗಡೆ.

 ‘ಜಾಕ್ಸನ್’ ಕನ್ನಡ ಸಿನೆಮಾ ವಿಜಯ್ ಹಾಗೂ ವೃಂದ (ಪಾವನಿ) ಮುಖ್ಯ ತಾರಾಗಣದ ಚಿತ್ರಕ್ಕೆ ೩೫ ದಿವಸಗಳ ಮಾತಿನ ಭಾಗದ ಚಿತ್ರೀಕರಣ ಮಾಡಲಾಗಿದೆ. ಅರ್ಜುನ್ ಜನ್ಯ ಅವರ ಹಾಡುಗಳು ಇತ್ತೀಚಿಗೆ ಬಿಡುಗಡೆ ಆಗಿ ಅಪಾರ  ಕೇಳುಗರನ್ನು ಸಂಪಾದಿಸಿಕೊಂಡಿದೆ.   ಧುನಿಯ ಟಾಕೀಸ್ ಅರ್ಪಿಸುವ, ಕೆ ಪಿ ಎಸ್ ಕಂಬೈನ್ಸ್ ಚಿತ್ರ ‘ಜಾಕ್ಸನ್’.

 ಸುಂದರ್ ಗೌಡ್ರು ‘ಜಾಕ್ಸನ್’ ಚಿತ್ರದ ನಿರ್ಮಾಪಕರು. ತಮಿಳಿನ ‘ಇದಕುತಾನ ಆಸೈ ಪಟ್ಟೈ ಬಾಲಕುಮರ’ ಚಿತ್ರದ ರೀಮೇಕ್ ಕಾಮಿಡಿ ತುಂಬಿದ ಮನರಂಜನೆ ಸಿನೆಮಾ. ಒಂದು ಸಂದೇಶ ಸಹ ಚಿತ್ರ ಒಳಗೊಂಡಿದೆ.

ಚಿತ್ರದ ನಿರ್ದೇಶಕ ಈ ಮೊದಲು ಸಂಕಲನಕರ ಆಗಿದ್ದ ಸನತ್ ಕುಮಾರ್. ರಂಗಾಯಣ ರಘು, ನಾಗೇಂದ್ರ ಶಾ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

 ಕಿರಣ್ ಅವರ ಸಂಭಾಷಣೆ, ಸೆಲ್ವಮ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇದೆ. ಯೋಗರಾಜ್ ಭಟ್, ಚೇತನ್ ಕುಮಾರ್, ಅವರ ಹಾಡುಗಳು ಒದಗಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed